   ಮೂಲದೊಡನೆ ಪರಿಶೀಲಿಸಿ

ಐಸೋಜೈಮುಗಳು: ಒಂದೇ ಬಗೆಯ ಪ್ರಾಣಿಯಲ್ಲಿ ಒಂದೇ ಕಿಣ್ವಕ್ಕೆ ಅನೇಕ ಬಗೆಯ ರಚನೆಗಳಿದ್ದಾಗ ರಚಿತವಾಗುವ ಘಟಕಗಳು. ಪ್ರೋಟೀನುಗಳ ಚತುರ್ಥ ಮಟ್ಟದ ರಚನೆ ಐಸೊಜೈಮುಗಳ ರಚನೆಗೆ ಆಧಾರಭೂತವಾಗಿದೆ. ಇಂಥ ಕಿಣ್ವಗಳ ಬಗ್ಗೆ ತಿಳಿದುಬಂದಿರುವ ಜ್ಞಾನವನ್ನು ಲ್ಯಾಕ್ಟಿಕ್ ಡೀಹೈಡ್ರೋಜಿನೇಸ್ ಕಿಣ್ವದ ಬಗ್ಗೆ ನಡೆಸಿರುವ ಸಂಶೋಧನೆಗಳಿಂದ ಬಲುಮಟ್ಟಿಗೆ ಸಂಗ್ರಹಿಸಲಾಗಿದೆ. ಈ ಕಿಣ್ವ ಕೆಳಗೆ ಕಾಣಿಸಿರುವ ಕ್ರಿಯೆಯನ್ನು ವರ್ಧಿಸುತ್ತದೆ.

                               ಕಿಣ್ವ
ಅಊ3.ಅಔ.ಅಔಔ¯+ಓಂಆಊ+ಊ+ ಅಊ3.ಅಊಔಊ.ಅಔಔ¯
         ಪೈರೊವೇಟ್		          ಲ್ಯಾಕ್ಟೇಟ್
ಕೋಳಿಯಲ್ಲಿ ಈ ಕಿಣ್ವ ಮುಖ್ಯವಾಗಿ ಎರಡು ರೂಪದಲ್ಲಿ ದೊರೆಯುತ್ತದೆ. ಒಂದು ಹೃದಯದ ಮಾಂಸಖಂಡಕ್ಕೂ ಇನ್ನೊಂದು ಎದೆಯ ಮಾಂಸಖಂಡಕ್ಕೂ ವಿಶಿಷ್ಟವಾದದ್ದು. ಇವೆರಡು ಬಗೆಯ ಕಿಣ್ವಗಳಿಗೆ ಅಮೈನೋ ಆಮ್ಲಗಳ ರಚನೆಯಲ್ಲಿಯೂ ಭೌತ ಮತ್ತು ಇಮ್ಯೂನೊಲಾಜಿಕಲ್ ಗುಣದಲ್ಲಿಯೂ ವೇಗವರ್ಧಕ ಕ್ರಿಯೆಯಲ್ಲಿಯೂ ವ್ಯತ್ಯಾಸಗಳಿವೆ. ಕೋಳಿ ಮತ್ತು ಇತರ ಪ್ರಾಣಿಗಳಿಂದ ಐದು ಬಗೆಯ ಲ್ಯಾಕ್ಟಿಕ್ ಡೀ ಹೈಡ್ರೋಜಿನೇಸುಗಳನ್ನು (ಐಆಊ) ಬೇರ್ಪಡಿಸಲಾಗಿದೆ.	

ಇವುಗಳಲ್ಲೆ ಮೂರಕ್ಕೆ, ಎದೆಯ ಮಾಂಸಖಂಡ ಕಿಣ್ವಕ್ಕೂ, ಹೃದಯ ಮಾಂಸಖಂಡ ಕಿಣ್ವಕ್ಕೂ ಮಧ್ಯಂತರ ಗುಣಗಳಿವೆ. ಉದಾಹರಣೆ ಐಆಊನ್ನು ವಿದ್ಯುತ್ಕ್ಷೇತ್ರೀಯ ಚಲನೆಗೆ (ಎಲೆಕ್ಟ್ರೋಫಾರಿಸಿಸ್) ಗುರಿಪಡಿಸಿದರೆ ಸುಸ್ಪಷ್ಟವಾದ ಒಂದರಿಂದ ಇನ್ನೊಂದು ಸಮಾಂತರದಲ್ಲಿರುವ ಐದು ಪಟ್ಟೆಗಳು (ಬ್ರಾಂಡ್ಸ್‌) ಕಂಡುಬರುತ್ತವೆ. ಎದೆಯ ಮಾಂಸಖಂಡದ ಕಿಣ್ವ ಒಂದು ತುದಿಯಲ್ಲಿಯೂ ಹೃದಯ ಮಾಂಸಖಂಡದ ಕಿಣ್ವ ಇನ್ನೊಂದು ತುದಿಯಲ್ಲಿಯೂ ಇರುತ್ತವೆ. ಅಲ್ಲದೆ ಈ ಐದು ಐಸೊಜೈಮುಗಳ ಅಮೈನೋ ಆಮ್ಲ ಘಟನೆಯನ್ನು ಪರಿಶೀಲಿಸಿದರೆ ಹೃದಯದ ಕಿಣ್ವದಿಂದ ಹಿಡಿದು ಎದೆಯ ಕಿಣ್ವದವರೆಗೆ ಕ್ರಮಾನುಗತಿಕ ವ್ಯತ್ಯಾಸಗಳು ಕಂಡುಬರುತ್ತವೆ. ಇದೇ ತರಹೆಯ ವ್ಯತ್ಯಾಸಗಳನ್ನು ವೇಗವರ್ಧಕ ಕ್ರಿಯೆ ಮತ್ತು ಇಮ್ಯೂನೊಲಾಜಿಕಲ್ ಗುಣಗಳಲ್ಲಿಯೂ ಕಾಣಬಹುದು.

ಐಆಊನ್ನು ರಚನೆಯನ್ನು ಪರಿಶೀಲಿಸಿದಾಗ, ಇಂಥ ನಡತೆಗಿರುವ ಆಧಾರವನ್ನು ಕಂಡುಕೊಳ್ಳಬಹುದು. ಕಿಣ್ವವನ್ನು ಮರ್ಕ್ಯಾಪ್ಟೋ ಎಥನಾಲ್ ಸೇರಿರುವ ಗ್ಯಾನಿಡಿನಿಯಂ ಕ್ಲೋರೈಡ್ ದ್ರಾವಣದಿಂದ ಸಂಸ್ಕರಿಸಿ ನಾಲ್ಕು ಉಪಾಂಗಗಳನ್ನು ಪಡೆಯಬಹುದು. ಇದು ಚತುರಂಶವುಳ್ಳ ಕಿಣ್ವವಾಗಿದ್ದರೆ (ಹೌದೆನ್ನುವುದಕ್ಕೆ ಆಧಾರಗಳಿವೆ) ಇದನ್ನು ಬೇರೆ ಬೇರೆ ಎರಡು ಜೀನಿಗಳಿಂದ ನಿರ್ದೇಶಿತವಾದ ಎರಡು ಬಗೆಯ ಉಪಾಂಗವುಳ್ಳ ಪ್ರೋಟೀನೆಂದು ಭಾವಿಸಿ ಮೇಲೆ ಹೇಳಿದ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬಹುದು. ಹೃದಯದ ಮಾಂಸಖಂಡದ ಕಿಣ್ವ ಊ ವರ್ಗದ ಮತ್ತು ಎದೆಯ ಮಾಂಸಖಂಡದ ಕ್ವಿಣ ಒ ವರ್ಗದ ಉಪಾಂಗಗಳಿಂದ ರಚಿತವಾಗಿದೆಯೆಂದು ಭಾವಿಸಿದರೆ ರಚನೆಯಲ್ಲಿ ಭಿನ್ನವಾಗಿರುವ ಐದು ಬಗೆಯ ಐಆಊ ಗಳನ್ನು - ಊಊಊಊ, ಊಊಊಒ, ಊಊಒಒ, ಊಒಒಒ, ಒಒಒಒ- ಪಡೆಯಬಹುದು. ಇಂಥ ಘಟನೆಗಳನ್ನು ರೂಪಿಸುವಾಗ ಚತುರಂಶಿಯ (ಟೆಟ್ರಾಮರ್) ಪ್ರತಿಯೊಂದು ಉಪಾಂಗ ಇನ್ನೊಂದಕ್ಕೆ ಎಲ್ಲ ವಿಧದಲ್ಲಿಯೂ ಸಮಾನವೆಂದು ಭಾವಿಸಲಾಗಿದೆ. ಇಲ್ಲದಿದ್ದರೆ ಊಊಊಒ ರಚನೆಯುಳ್ಳ ನಾಲ್ಕು ಬಗೆಯ ಅಣುಗಳನ್ನು ಪಡೆಯಬಹುದು. ಐಆಊ ಎರಡು ಬಗೆಯ ಉಪಾಂತಗಳಿಂದ ರಚಿತವಾದ ಕಿಣ್ವವೆಂದು ಭಾವಿಸಿ ಅದರ ಗುಣಗಳಲ್ಲಿ ತೋರಿಬರುವ ಕ್ರಮಾನುಗತಿಕ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬಹುದು.

ಇತರ ಐಸೊಜೈಮುಗಳ ಗುಣಗಳನ್ನು ಅವುಗಳ ರಚನೆಯ ಆಧಾರದ ಮೇಲೆ ವಿವರಿಸಬಹುದೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರೆತಿಲ್ಲ. ಲ್ಯಾಕ್ಟಿಕ್ ಡೀಹೈಡ್ರೋ ಜಿನೇಸಿನಂಥ ಕ್ವಿಣಗಳನ್ನು ಸಂಕರಕಿಣ್ವಗಳೆಂದು ಕರೆಯಬಹುದೆಂಬ ಸೂಚನೆಯನ್ನೂ ಮಾಡಲಾಗಿದೆ.                                     (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ